Dear
ಒಂದೊಂದು ಸಲ ಎಷ್ಟು ಇಷ್ಟ ಆಗ್ತೀಯ ಅಂದ್ರೆ, ನಿನ್ನ ಕೈಗೆ ನನ್ನ ಬದುಕನ್ನು ಪೂರ್ತಿಯಾಗಿ ಒಪ್ಪಿಸಿ ನೆಮ್ಮದಿಯಾಗಿದ್ದುಬಿಡೋಣ ಅನ್ನಿಸಿ ಬಿಡುತ್ತೆ. ಪರಿಚಯವಾದ ದಿನದಿಂದಲೂ ಇದೇ ಭಾವ. ಪುಟ್ಟ ಮಗುತರ ನೋಡ್ತೀಯ. ಹಾಗೊಂದು ವೇಳೆ ನೀನು ಸಿಗದೇ ಹೋಗಿದ್ದರೆ, ಈ feeling ಸಿಗ್ತಾನೆ ಇರ್ಲಿಲ್ಲವಾಗಿತ್ತು. ನಂಗೊತ್ತು, ನಾನು ಚಂದ ಇದ್ದಿನಿ. ಮಾತಿನಲ್ಲೊಂದು ಆತ್ಮೀಯತೆ ಇರುತ್ತೆ, ಹುಡುಗರು ಇಷ್ಟಪಡೋ ಎಷ್ಟೋ ಸಂಗತಿಗಳು ನನ್ನಲ್ಲಿವೆ. ಹಾಗೆ, ಪರಿಚಯಾದ ಸ್ವಲ್ಪ ದಿನಗಳಲ್ಲೇ ಅವರು ನನ್ನ ಪ್ರೀತಿಸೋಕೆ start ಮಾಡ್ತಾರೆ ಅಂದರೆ ಅದು ನಂಗೆ ಹೊಸತಲ್ಲ...! ಚಿಕ್ಕಂದಿನಿಂದಲೂ ಹುಡುಗರ ಜೊತೆಲೇ ಬೆಳೆದವಳು. ಎಷ್ಟೊಂದು ಅಣ್ಣ ತಮ್ಮಂದಿರ ಮಧ್ಯೆ, ಈಡಿ ಕುಟುಂಬಕ್ಕೆ ಒಬ್ಬಳೆ ಮಗಳಾಗಿ ಹುಟ್ಟಿದವಳು. ನನಗೆ, ಗೆಳತಿಯರಿಗಿಂತ ಗೆಳೆಯರೇ ಹೆಚ್ಚು. ಆದರೆ ನನ್ನಲ್ಲಿ, ನಿಜವಾಗಲೂ, 'ಜೀವದ ಗೆಳೆಯ' ಬೇಕು ಅನ್ನೊ ಆಸೆ ಮುಡಿಸಿದ್ದು ಮಾತ್ರ ನೀನೇ.
ಚಿಕ್ಕಂದಿನಿಂದಲೂ ಅಷ್ಟೆ, ನನ್ನ ಆಸೆಗಳೆಲ್ಲ ನೆರವೇರಿವೆಯೇ ಹೊರತು, ನೆರವೇರದೆ ಇರುವಂತಹುದು ನನಗೆ ನೆನಪಿಲ್ಲ. ಅಪ್ಪಾಜಿ, ಅಣ್ಣಂದಿರು ನನ್ನ ಆಸೆಗಳನ್ನೆಲ್ಲ ನೆರವೇರಿಸಿದ್ದಾರೆ. ಮನೆಯಿಂದ ದೂರ ಇದ್ದೆ ಬೆಳೆದವಳು ನಾನು. ಅಪ್ಪಾಜಿ ನನ್ನನ್ನು ಯಾವುದಕ್ಕೂ ನಿರ್ಭಂದಿಸಿಲ್ಲ. ಅಮ್ಮ ಆಣೆ ಪ್ರಮಾಣ ಮಾಡಿಸಿಕೊಂಡಿಲ್ಲ. ನಾನು ಮೊದಲಿನಿಂದಲೂ ಅಷ್ಟೆ ನನಗೆ ಇಷ್ಟವಾದುದನ್ನೇ ಮಾಡುತ್ತ ಬಂದೆ. ಯಾವುದಕ್ಕೂ ಯಾರೂ ನಿರ್ಭಂದನೆ ಮಾಡಿಲ್ಲ. ಬೇಸರಿಸಿಕೊಂಡಿಲ್ಲ. ಎಲ್ಲ ಗೆಳೆಯ, ಗೆಳತಿಯರು ರೇಗಿಸುತ್ತಿದ್ದರು. 'ರಾಜಕುಮಾರಿ' ಅಂತಿದ್ದರು. ಈ ರಾಜಕುಮಾರಿಗೆ ರಾಜಕುಮಾರ ಎಲ್ಲಿದ್ದಾನೋ? ಯಾವಾಗ ಬರುವನೋ ಅಂತೆಲ್ಲ ರೇಗಿಸುತ್ತಿದ್ದರು. ಆಗಲೂ ಯಾವ ರಾಜಕುಮಾರನೂ ಕನಸಿನಲ್ಲೂ ಬಂದು ಕಾಡಿರಲಿಲ್ಲ.
ಆದರೆ ನಿನ್ನ ಪರಿಚಯವಾದಂದಿನಿಂದ ಅದೇನಾಯಿತು ಹೇಳು? ಎಲ್ಲಿಂದಲೋ ಎದ್ದು ಬಂದ ಕನಸೊಂದು ನನ್ನ ನಿದ್ದೆ ಕೆಡಿಸಿಬಿಟ್ಟಿತಲ್ಲ? ಮೊದಮೊದಲು ಎನೂ ಇಲ್ಲ ಅಂದುಕೊಂಡೆ. ಆದರೆ ಮನಸ್ಸು ಕೇಳಲಿಲ್ಲ. ನಿನ್ನ ಬಗ್ಗೆ ತಿಳಿದುಕೊಳ್ಳೊ ಹಂಬಲ, ಮಾತನಾಡೋ ತವಕ. ಹತ್ತೇ ಹತ್ತು ನಿಮಿಷದ ಮಾತಿಗಾಗಿ ದಿನವಿಡೀ ಕಾದಿರುತ್ತಿದ್ದೆ. ನಾಳೆ ಸಿಗಲ್ಲ ಅಂತ ಅಂದು ಹೋದರೂ, ಮಾರನೇಯದಿನ ಮನಸ್ಸು ತಡೆಯದೆ ಓಡಿ ಬರುತ್ತಿದ್ದೆ..! ನಿನಗಾಗೆ ಕಾದಿದ್ದು, ಅಚಾನಕ್ಕಾಗಿ ಸಿಕ್ಕಿರುವಂತೆ ಆಶ್ಚರ್ಯ ಪಡುತ್ತಿದ್ದೆ...! ಅಕಸ್ಮಾತ್ ಆಗಿ ಸಿಕ್ಕ ಹುಡುಗ, ಅಕಸ್ಮಾತ್ ನನ್ನ ಮಾತನಾಡಿಸಿದ ಹುಡುಗ - ಈ ಪರಿ ಇಷ್ಟವಾಗುವುದುಂಟೆ? ಇದು ಇಷ್ಟವಾ? ಮೋಹವಾ? ಪ್ರೀತಿನಾ? ಸುಳ್ಳೆ ಕಾಡುತ್ತಿರುವ ಒಂದು ಕನಸು ಮಾತ್ರವಾ?!
ಎಷ್ಟೋ ಸಲ ಈ ಪ್ರಶ್ನೆಯನ್ನು ಕೇಳಿಕೊಂಡಿದ್ದೆನೆ. ನಿನ್ನ ಆತ್ಮೀಯತೆಯೊಂದೆ ಈ ಪ್ರಶ್ನೆಗಳಿಗೆ ಉತ್ತರದಂತೆ ನನ್ನ ಮನದಲ್ಲೊಂದು ಹೂದೋಟ ಅರಳಿಸಿ ಸುಮ್ಮನಾಗಿಸುತ್ತದೆ. ಕೇಳಿದರೆ ನಿಂಗೆ ಸಿಟ್ಟು ಬರುತ್ತದೆನೋ? ಆದ್ರೂ ಹೇಳ್ತಿನಿ. ನಂಗೆ ನಿನ್ನನ್ನು ಕಂಡರೆ ಇಷ್ಟ. ನಿನ್ನ ಜೊತೆನೇ ಬದುಕಬೇಕು ಅನ್ನಿಸುತ್ತದೆ. ನೀನು ನನಗೆ ಮಾತ್ರ ಬೇಕು ಅನ್ನಿಸುತ್ತದೆ. ನೀನು ಇಷ್ಟ ಪಡೋ ಹಾಡುಗಳೆಲ್ಲ ನಂಗೂ ಇಷ್ಟ. ಬ್ಲಾಕ್ ಜೀನ್ಸ್, ವೈಟ್ ಶರ್ಟ್ ಹಾಕಿದ್ರೆ ತುಂಬಾ ಚೆನ್ನಾಗಿ ಕಾಣ್ತಿಯ. ನೀನ್ ಸಿಗರೇಟ್ ಸೇದೋದು ನಂಗೆ ಇಷ್ಟ ಆಗಲ್ಲ. ಭಯ ಆಗುತ್ತೆ..! ಆದರೆ ನೀನು ಸಿಗರೇಟ್ ಸೇದೋವಾಗ ನಿನ್ನನ್ನೆ ನೋಡ್ತಾ ಇರ್ಬೆಕು ಅನ್ಸುತ್ತೆ. ಒಂದು ದಿನ ಅಡಿಗೆ ಮಾಡಿ ನನಗೆ ಊಟ ಮಾಡಿಸಿದ್ರೆ ನಂಗೆ ತುಂಬಾ ಇಷ್ಟ ಆಗುತ್ತೆ. ನಿನ್ನ ತೊಡೆಮೇಲೆ ತಲೆ ಇಟ್ಟು ಮಲಗಬೇಕು ಅನಿಸುತ್ತೆ - ಎಲ್ಲ ಇವತ್ತೆ ಬೇಕು ಅನ್ನಿಸಿಬಿಡುತ್ತೆ. ನಾನು ಯಾವುದಕ್ಕೂ ಇಷ್ಟೊಂದು ತೀವ್ರವಾಗಿ ಚಡಪಡಿಸಿದವಳಲ್ಲ. ಇದನ್ನೆಲ್ಲ ಅಪ್ಪಾಜಿಗೆ ಹೇಳಿ ಬಿಡೋಣ ಅನ್ನಿಸ್ತ ಇದೆ. ನಂಗೆ ಮದುವೆ ಮಾಡಿ ಅಂತ ಹೇಳೋದು ತಪ್ಪಾ? ನಂಗೊತ್ತಿಲ್ಲ.
ಅಷ್ಟು ಹೇಳಿದರೆ ಸಾಕು. ಅಪ್ಪಾಜಿ ನಿನ್ನ ಹುಡುಕಿಕೊಂಡು ಬಂದು ಬಿಡುತ್ತಾರೆ. ಮಗಳು ಯಾವತ್ತು ಏನು ಕೇಳಿದರೂ ಬೇಡ ಅಂದವರಲ್ಲ. ಅದರು ಬಂದ ದಿನ ಪ್ಲೀಸ್, ಸಿಗರೇಟ್ ಬೇಡ. ಇವತ್ತಿನವರೆಗೆ ಸಿಗರೇಟೇನು, ಕಾಫಿ ಸಹ ಕುಡಿದವರಲ್ಲ ಅಪ್ಪಾಜಿ. ನಿನ್ನ ಕೈಯಲ್ಲಿ ಸಿಗರೇಟ್ ನೋಡಿದರೆ ನೊಂದುಕೊಳ್ತಾರೆನೋ..! ಅವತ್ತು, ನಂಗೋಸ್ಕರ, ವೈಟ್ ಶರ್ಟ್ ಹಾಕ್ಕೊ. ಇವಾಗ್ಲೇ ಹೇಳಿ ಬಿಡ್ತೀನಿ ಅಪ್ಪಾಜೀನ ನೋಡಿ ಜಲಸ್ ಆಗಬೇಡ. ಅಪ್ಪ ನನ್ನ first boy friend. ನಿಂಗೆ ಅವರು ತುಂಬಾ ಇಷ್ಟ ಅಗ್ತಾರೆ ಅಂತ ನಂಬಿಕೆ ಇದೆ. ಇನ್ನು ಅಮ್ಮ.... ಅಮ್ಮ ತುಂಬಾ ಚೆಂದ ಇದ್ದಾಳೆ. ದಂತದ ಗೊಂಬೆ. ಅವಳಷ್ಟು ಚೆಂದಗಿಲ್ಲ ನಾನು. ಪ್ರೀತ್ಸೋದು ನಮ್ಮನೇಲಿ ಹೆರಿಡಿಟರಿ. ಅಪ್ಪಾಜೀ ಕೂಡ ಅಮ್ಮನ್ನು ಪ್ರೀತಿಸಿಯೇ ಮದುವೇ ಆಗಿದ್ದು. ಮದುವೆಯಾದ ದಿನದಿಂದ ಇವತ್ತಿನ ತನಕ ಹೂವಲ್ಲಿ ಇಟ್ಟೇ ನೋಡ್ಕೊಂಡಿದಾರೆ. ಫ್ರೆಂಡ್ಸ್ ಥರಾ ಇರ್ತಾರೆ. ಅವರಿಬ್ಬರ ನಡುವೆ ಗುಟ್ಟುಗಳಿಲ್ಲ. ಅಮ್ಮ ಯಾವತ್ತೂ ಅಪ್ಪಾಜೀನ ಏನೂ ಕೇಳಲ್ಲ. ಅಪ್ಪಾಜೀ, ಅಮ್ಮನ ಮುಂದೆ ಯಾವುದನ್ನೂ ಮುಚ್ಚಿಡಲ್ಲ. ನಂಗೆ, ಅವರ ಹುಸಿ ಮುನಿಸು, ಪ್ರೀತಿ, ಗೆಳೆತನ ಎಲ್ಲ ಇಷ್ಟವಾಗುತ್ತೆ. ಅಪ್ಪಾಜೀಗೆ promise ಮಾಡಿ ಹೇಳು; ನಾವಿಬ್ರೂ ಹಾಗೆ ಇರ್ತಿವಿ ಅಂತ. ನನ್ನನ್ನೂ ಹಾಗೆ ನೋಡ್ಕೋತೀಯ ಅಂತ.
ಆದ್ರೆ ಕೇಳು: ಚೆನ್ನಾಗಿ ನೋಡಿಕೊಳ್ಳೊದು ಅನ್ನೊದಕ್ಕೆ ನಂಗೆ ನನ್ನದೇ ಆದ ಕಾನ್ಸೆಫ್ಟ್ ಇದೆ. ತುಂಬಾ ದುಡ್ಡು, ಕಾರು, ಬಂಗಲೆ, ಒಡವೆ, ದೇಶ ದೇಶ ಸುತ್ತಿಸೋದು ಇವೆಲ್ಲ ಏನೂ ಬೇಡ ನನಗೆ. ಒಂದೇ ಒಂದು promise ಮಾಡು. ಯಾವತ್ತೂ ನಂಗೆ ನಿನ್ನ ಸಾಹಚರ್ಯ ಉಸಿರುಗಟ್ಟಿಸೋಹಾಗೆ ಆಗಲ್ಲ ಅಂತ. ಯಾವತ್ತೂ ನಂಗೆ 'ಯಾಕಾದರೂ ಇವನನ್ನು ಮದುವೆ ಆದ್ನೋ' ಅನ್ನೋ ಹಾಗೆ ಅನ್ನಿಸದೆ ಇರೋ ತರಹ ನೋಡ್ಕೋತಿನಿ ಅಂತ. ಯಾವತ್ತೂ ನಾನು ಒಬ್ಬಂಟಿಯಾಗಿ ಒಳಮನೆಯ ಕತ್ತಲೆಯಲ್ಲಿ ನಿಂತು ಕಣ್ಣಿರಿಡೋ ಹಾಗೆ ಮಾಡಲ್ಲ ಅಂತ. ಕಡೇ ಮಾತು ಹೇಳ್ತೀನಿ ಕೇಳು:
ಎಷ್ಟು ದಿನ ಬದುಕಿರುತ್ತಿನೋ ಗೊತ್ತಿಲ್ಲ. ಆದ್ರೆ ಬದುಕಿರೋಷ್ಟು ದಿನ ನಿನ್ನ ಜೊತೆ ನಗುತ್ತಿರಬೇಕು ಅನ್ನೊ ಆಸೆ. ಒಂದು ಕ್ಷಣಕ್ಕೂ ನೀನು ಬೇಸರಿಸದಂತೆ ನೋಡಿಕೊಳ್ತೀನಿ. I will be always with you. ಒಬ್ಬ ಹುಡುಗಿ ತಾನು ಮನಸಾರೆ ಪ್ರೀತಿಸಿದ ಹುಡುಗನಿಂದ ನಿನ್ನೆನನ್ನು ಬಯಸಲು ಸಾಧ್ಯ ಹೇಳು? ಬದುಕು ತುಂಬಾ ಕಾಡುತ್ತೆ. job, money, ಖಾಯಿಲೆ, ಬೇಸರ, ಜಗಳ ಹೀಗೆ.. ಎಲ್ಲ ಕಾಡುತ್ತವೆ. ಕೈಹಿಡಿದು ಜಗ್ಗುತ್ತವೆ. ಆದರೆ ಏನೇ ಆದರೂನೂ ಇಬ್ಬರೂ ಕೊನೆವರೆಗೂ ಜೊತೆಯಲ್ಲಿರ್ತೀವಿ.. ಇವತ್ತಿನ ತರಹವೇ.. ಅದೇ ಪ್ರೀತಿ, ಆತ್ಮೀಯತೆಯಿಂದ ಅಂತ ಪ್ರಾಮಾಣಿಕವಾಗಿ ಹೇಳಿಕೊಂಡುಬಿಟ್ರೆ ಸಾಕು.
ನಾವು ಚೆನ್ನಾಗಿರ್ತೀವಿ.
ಅಂಥಹುದೊಂದು ನಂಬಿಕೆ ಇಟ್ಟುಕೊಂಡೆ ಇಷ್ಟೆಲ್ಲ ಬರ್ದಿದೀನಿ. ನಿಂಗಿಷ್ಟವಾಗುತ್ತೆ ಅಂತ ನಂಬಿಕೆ ಇದೆ. ನೀನೊಂದು ಪತ್ರ ಬರಿ. ಅದರಲ್ಲಿ ನಾನಿರ್ತೀನಿ...!
ನಿನ್ನವಳು.
ಮೀನು ಹಿಡಿಯುವುದು ಇಷ್ಟು ಸುಲಭವೇ? ಪಂಪ!
13 ಗಂಟೆಗಳ ಹಿಂದೆ

15 comments:
"ಯಾವತ್ತೂ ನಾನು ಒಬ್ಬಂಟಿಯಾಗಿ ಒಳಮನೆಯ ಕತ್ತಲೆಯಲ್ಲಿ ನಿಂತು ಕಣ್ಣಿರಿಡೋ ಹಾಗೆ ಮಾಡಲ್ಲ ಅಂತ"
ಈ ಸಾಲು ತು೦ಬಾ ಇಷ್ಟ ಆಯ್ತು... ಇದು ಬಹುಶಃ ಪ್ರತಿಯೊಬ್ಬ ಹೆಣ್ಣುಮಗಳೂ ಅ೦ದುಕೊಳ್ಳುವ ವಿಷಯ. ನೀವು ನೇರವಾಗಿ ಹೇಳಿದ್ದೀರಿ.
ಚನ್ನಾಗಿದೆ.
maththe maththe odikollabekenisuvanthaha pathra...ishtiddare preethiyalli saaku alva... ibbaru thumba chennagi iddu bidabahudu.
ರಂಜನಾ,
ನಿಮ್ಮ ಪತ್ರ ಓದ್ತಾ ಇದ್ರೆ ಎಲ್ಲೋ ಕಳೆದು ಹೋಗಿ ಬಿಡ್ತೀನಿ ಕಣ್ರೀ. ಆ ಹುಡುಗ ತುಂಬಾ ಅದೃಷ್ಟವಂತ ಅನ್ಸುತ್ತೆ. ನಿಮ್ಮಷ್ಟು ತೀವ್ರವಾಗಿ ಪ್ರೀತಿಸೋ ಹೃದಯ ಎಲ್ಲರಿಗೂ ಸಿಗಲಿ ಅಂತ ಹಾರೈಸ್ತೀನಿ.
ಒಂದೇ ಒಂದು ಪ್ರಾಮಿಸ್ ಮಾಡು. ಯಾವತ್ತೂ ನಂಗೆ ನಿನ್ನ ಸಾಹಚರ್ಯ ಉಸಿರುಗಟ್ಟಿಸೋಹಾಗೆ ಆಗಲ್ಲ ಅಂತ. ಯಾವತ್ತೂ ನಂಗೆ 'ಯಾಕಾದರೂ ಇವನನ್ನು ಮದುವೆ ಆದ್ನೋ' ಅನ್ನೋ ಹಾಗೆ ಅನ್ನಿಸದೆ ಇರೋ ತರಹ ನೋಡ್ಕೋತಿನಿ ಅಂತ. ಯಾವತ್ತೂ ನಾನು ಒಬ್ಬಂಟಿಯಾಗಿ ಒಳಮನೆಯ ಕತ್ತಲೆಯಲ್ಲಿ ನಿಂತು ಕಣ್ಣಿರಿಡೋ ಹಾಗೆ ಮಾಡಲ್ಲ ಅಂತ.
ತುಂಬಾ ಇಷ್ಟವಾದವು ಈ ಸಾಲುಗಳು. ಒಂದು ಪ್ರೀತಿಸೋ ಹೃದಯ ತನ್ನ ಸಂಗಾತಿಯಿಂದ ಇದಕ್ಕಿಂತ ಹೆಚ್ಚಿನದೇನನ್ನು ತಾನೇ ನಿರೀಕ್ಷಿಸಲು ಸಾಧ್ಯ?
ಚಂದದ ಬರಹ, ಅಭಿನಂದನೆಗಳು.
-ಉಮೇಶ್
ರಂಜನ,
ಪತ್ರ ತುಂಬಾ ಸೊಗಸಾಗಿದೆ, ಭಾವನೆಗಳ ಹಿಡಿದಿಡುವುದರಲ್ಲಿ ನೀವು ಸಿದ್ಧಹಸ್ತರು,
ಓದುತ್ತ ಓದುತ್ತ ಕಳೆದು ಹೋದೆನೇನೋ ಎನ್ನಿಸಿಬಿಟ್ಟಿತು.
ranjana....... ninna preeti bega sigali.......
ರಂಜನಾ, ಅಲ್ಲ ರಾಜಕುಮಾರಿ,
ನಿಮ್ಮ ರಾಜಕುಮಾರನ ಪ್ರೀತಿ ನಿಮಗೆ ಬೇಗ ಸಿಗಲಿ...
"ಯಾಕಾದರೂ ಇವನನ್ನು ಮದುವೆ ಆದ್ನೋ" ಇಷ್ಟು ಅನ್ನಿಸದಿದ್ದರೆ ಸಾಕು.... ಸುಖ ತುಂಬಿರುತ್ತೆ...
ಚೆಂದದ ಬರಹ...
Olleya Patra.
Ee thara hudugeeru nijawaglu irthara..?
naveenboosnur@gmail.com
ರಂಜನ..
ತುಂಬ ಚೆನ್ನಾಗಿ ಇದೆ ನಿಮ್ಮ ಈ ಬರಹ.. ಕೆಲವೊಂದು ಸಾಲುಗಳನ್ತು ತುಂಬ ಹಿಡಿಸಿದವು... ಬರಹದ ಮೂಲಕ ಭಾವನೆಗಳನ್ನು ತುಂಬ ಚೆನ್ನಾಗಿ ಬರೆದಿದ್ದೀರ...
ನಿಮ್ಮ ಪ್ರೀತಿಗೆ ಮೋಸ ಆಗದೆ ಇರುವಂತ...ಒಳ್ಳೆ ಗುಣವಂತ ನೆ ನಿಮ್ಮ ಜೊತೆಗೆ ಇರುತ್ತಾರೆ ಡೋಂಟ್ ವರಿ ....
ಗುರು
Nanu sign madidaru anamikane sari...Adare...Nanu hige maduvudakke karana ide.... for details:
udupilife.blogspot.com
ನಿಮ್ಮ ಬರಹ ಮನ ಮುಟ್ಟುವಂತಿದೆ
ಯಾವತ್ತೂ ನಾನು ಒಬ್ಬಂಟಿಯಾಗಿ ಒಳಮನೆಯ ಕತ್ತಲೆಯಲ್ಲಿ ನಿಂತು ಕಣ್ಣಿರಿಡೋ ಹಾಗೆ ಮಾಡಲ್ಲ ಅಂತ"
ಭಾವನೆಗಳನ್ನು ಹೀಗೆ ವ್ಯಕ್ತಪಡಿಸ್ತಾ ಇರಿ, ನಿಮ್ಮ ರಾಜಕುಮಾರ ಓಡಿ ಬರ್ತಾನೆ ನೋಡ್ತಾ ಇರಿ....
ರಂಜನಾ, ನಿಮ್ಮ ಮನಸ ಕದ್ದವನು ಬಹಳ ದಿನಗಳಿಂದ ನಿಮ್ಮ ಮನದಲ್ಲಿ ನಿಂತವನು ಅಂತೆಲ್ಲ ಹೇಳಿದ್ದೀರಿ ಅಂದಮೇಲೆ ಚನ್ನಾಗಿ ಗಮನಿಸಿ ಪರಿಶೀಲಿಸಿ ಇಬ್ಬರೂ ಹತ್ತಿರ ಬಂದಿದ್ದೀರಿ ಒಬ್ಬರನೊಬ್ಬರು ಅರಿತಿದ್ದೀರಿ, ಹಾಗಿರುವಾಗ ನಿಮ್ಮಲ್ಲಿ ಸಂದೇಹ ಬರಬಾರದು..ಅಥವಾ ಬಂದರೂ ಅದು ಆ ಕ್ಷಣದ ಮಹದಾಸೆಯ ಫಲ ಆಗಿರಬೆಕು..ಮಹದಾಸೆ ಏನು...?/ ಏನೇ ಆದರೂ ತನ್ನವ ಯಾವ ಕಾರಣಕ್ಕೂ ಇವಳನ್ನು ಯಕಾದರೂ ಮದುವೆಯಾದೆನೋ?? ಎನಿಸಬಾರದು..ನಿಮ್ಮ ಮನದಾಸೆ..ಮಹದಾಸೆ ಈಡೆರಲಿ ಎಂದೇ ನಮ್ಮೆಲ್ಲರ ಹಾರೈಕೆ, ಆಶೀರ್ವಾದ... ಶುಭ೦-ಮಸ್ತು.
simply super:):)
""" ತುಂಬ ಚೆನ್ನಾಗಿ ಇದೆ ನಿಮ್ಮ ಈ ಬರಹ """
ಅಪ್ಪ ನನ್ನ first boy friend.
...ಒಬ್ಬಂಟಿಯಾಗಿ ಒಳಮನೆಯ ಕತ್ತಲೆಯಲ್ಲಿ ನಿಂತು ಕಣ್ಣಿರಿಡೋ ಹಾಗೆ ಮಾಡಲ್ಲ ಅಂತ..
ಈ ೩ ಲೈನ್ಸ್ ನನ್ನ ಫೇವರೆಟ್ ಸಾಲುಗಳು
ನಿಮ್ಮ ಈ ಪ್ರೀತಿಗೆ vಜಯವಾಗಲಿ.
ಒಂದು ಕಮೆಂಟನ್ನು ಪೋಸ್ಟ್ ಮಾಡಿ